ನನ್ನ ಖುಷಿಗಾಗಿ ..
ಮುಲಾಮು : ಶುರುವಾಗಿದೆ ನೂತನ ಯಾತನೆ ಮಾಡಿತಿಹುದು ಗಾಯವ ನನ್ನೆದೆಯಲ್ಲಿ ನಿನ್ನ ಜೊತೆಗಿನ ನೆನಪುಗಳು ಹವಣಿಸುತ್ತಿದೆ ಮನ ಬಂದು ಉಪಚರಿಸು ನೀ ನನ್ನ ಪ್ರೀತಿಯ ಮುಲಾಮಿನಿಂದ ಸರಿಪಡಿಸು ಹಸಿಗಾಯ ನಿನ್ನ ನಲ್ಮೆಯ ಮನಸ್ಸಿನಿಂದ. ಅಪಹರಿಸು : ಕಳೆದುಹೋಗುವ ಭಯ ಕಾಡುತಿಹುದು ನನ್ನಲ್ಲಿ ದಿನದಿಂದ ದಿನಕ್ಕೆ ಎದೆಯ ಸಮೀಪಿಸುತಿರುವೆ ನೀ ನನ್ನ ಅಪಹರಿಸಲು ಕಳೆದು ಹೋದರು ಚಿಂತೆಯಿಲ್ಲ ಆದ್ರೆ ಭಂದಿಯಾಗುವ ಹೃದಯ ನಿನ್ನದಾಗಲಿ .. ಗಂಟುಮೂಟೆ : ಯಾವಾದಕ್ಕೂ ತಡೆಯದೆ ನಡೆ ನೀ ಗಂಟುಮೂಟೆ ಕಟ್ಟಿಕೊಂಡು ನೂತನ ಆಯಾಮಕ್ಕೆ ಸದಾ ಹೊಸ ಪಯಣದ ಬದುಕಿನ ಬಂಡಿಗೆ ಏರಿ ಸಾಗುತಿರು ಮುಂದೆ ನೂತನ ಒಲವಿಗೆ ಮನದ ಉತ್ಸಾಹಕ್ಕೆ ನಗುವಿಗೆ ಏಳ್ಗೆಯ ಶಿಖರಕ್ಕೆ .. ತಂಗಾಳಿ : ನನ್ನೆದೆಯಲ್ಲಿ ತಂಗಾಳಿ ಬೀಸುವ ಸದ್ದಾಗುತ್ತಿದೆ ನಿನ್ನಲುಮೆ ಕಾಲಿಟ್ಟಿದೆ ಸದ್ದಿಲ್ಲದೇ ಕೇಳುತಿಹುದು ಪಿಸುಮಾತುಗಳು ನೀ ಸನಿಹ ಬಂದಿರುವೇ ನನ್ನೆದೆಯಾ ಒಡಲಲ್ಲಿ ಪರಿವೆಯಿಲ್ಲದೇ .. ಸದ್ದು : ಗುಡಿಯೊಳಗಿನ ಗಂಟೆಗಳ ಹಾಗೆ ಸದ್ದು ಮಾಡುತಿವೆ ನಿನ್ನ ನೆನಪುಗಳು ಒಬ್ಬರಾದ ಮೇಲೆ ಒಬ್ಬರು ಬಂದು ಬಾರಿಸುವ ಹಾಗೆ ಒಂದಲ್ಲ ಒಂದು ನೆಪ ನಿನ್ನನ್ನು ನೆ...